ಚಾಲ್ತಿ ಕ್ರಯ-
ಚಾಲ್ತಿ ಕ್ರಯ (ಕರೆಂಟ್ ಕಾಸ್ಟ್) ಎಂದರೆ ಒಂದು ಆಸ್ತಿಯನ್ನು ಪಡೆಯಲು ನೀಡಲಾದ ಬೆಲೆ ಮತ್ತು ಮಾಡಲಾದ ಒಟ್ಟು ವೆಚ್ಚದ ಇಂದಿನ ಬೆಲೆಗಳ ಮಟ್ಟಕ್ಕೆ ಪರಿವರ್ತಿಸಲು ಸೂಚ್ಯಂಕಗಳು ಆಧಾರವಾಗಬಹುದು; ಅಂಥದೇ ಸರಕು ಅಥವಾ ಸೇವೆಯ ಚಾಲ್ತಿ ಬೆಲೆಯ ಸ್ಥಾನದಲ್ಲಿ ಅಳವಡಿಸಿಕೊಳ್ಳಬಹುದು. 

ಕಂಪನಿಯ ಆಸ್ತಿಗಳ ಬೆಲೆಯ ಮೇಲೆ ಪರಿಣಾಮ ಬಿರುವ ಬದಲಾವಣೆಗಳನ್ನು ಸರಿಹೊಂದಿಸುವ ಲೆಕ್ಕಾಚಾರಕ್ಕೆ ಅನುಗುಣವಾಗಿ ಒಂದು ಪದ್ಧತಿಯನ್ನು ವಿನ್ಯಾಸಮಾಡುವುದೇ ಚಾಲ್ತಿ ಲೆಕ್ಕಾಚಾರ ಪದ್ಧತಿಯಾಗಿದೆ. ಈ ಚಾಲ್ತಿ ಲೆಕ್ಕಾಚಾರ ಪದ್ಧತಿಯು- ಅದೇ ರೀತಿಯ ಆಸ್ತಿಯನ್ನು ಹೊಸದಾಗಿ ಬದಲಾಯಿಸಬೇಕಾದರೆ ಅ ಹೊಸದರ ಬದಲಾಯಿಸುವ ಬೆಲೆಯನ್ನರಿತು ದಾಖಲಿಸಿ ಪ್ರಸ್ತುವವಿರುವ ಒಂದು ಆಸ್ತಿಯ (ಅಥವಾ ಜವಾಬ್ದಾರಿಯ) ಬೆಲೆಯ ಮೇಲಿನ ಹಣದುಬ್ಬರದ ಪ್ರಭಾವವನ್ನು ಅರಿಯುವ ಪ್ರಯತ್ನವಾಗಿದೆ. ವ್ಯಾಪಾರದ ನಿತ್ಯದ ವ್ಯವಹಾರ-ವಹಿವಾಟುಗಳಲ್ಲಿ ಒಂದು ಆಸ್ತಿಯ ಗರಿಷ್ಠ ಸೇವಾ ಸಾಮಥ್ರ್ಯತೆಯನ್ನು ಆದಷ್ಟೂ ಕಡಿಮೆ ಬೆಲೆಯಲ್ಲಿ ಸಧ್ಯಕ್ಕೆ ಪಡೆಯುವುದಕ್ಕೆ ಸಂವಾದಿಯಾಗಿ ಮೂಲಬೆಲೆಯನ್ನಳೆಯುವುದೇ ಚಾಲ್ತಿ ಲೆಕ್ಕಾಚಾರವಾಗಿದೆ. ಈಗಾಗಲೇ ಇರುವ ಕಟ್ಟಡ ಅಥವಾ ಯಂತ್ರ ಸಾಮಗ್ರಿಯ ಉಪಯೋಗ ಮತ್ತು ಗುಣಮಟ್ಟಕ್ಕೆ ಸಮವಾಗಿ ಒಂದು ಕಟ್ಟಡ ಅಥವಾ ಯಂತ್ರಸಾಮಗ್ರಿಯನ್ನು ಹೊಂದುವ ಅಥವ ಉತ್ಪಾದಿಸುವಾಗಿನ ಚಾಲ್ತಿ ಕ್ರಯವನ್ನು ಲೆಕ್ಕಾಚಾರಮಾಡುವುದೇ ಚಾಲ್ತಿ ಲೆಕ್ಕಾಚಾರವಾಗಿದೆ. 

ಒಂದು ಅಢಾವು ಪಟ್ಟಿಯಲ್ಲಿರುವ ಎಲ್ಲ ಅಂಶಗಳಿಗೆ ಅಥವಾ ಅವುಗಳಲ್ಲಿ ಕೆಲವಕ್ಕೆ ಇಂದಿನ ಬೆಲೆಗಳ ಮಟ್ಟದಲ್ಲಿ ನಿರ್ಧರಿಸಲಾದ ಕ್ರಯ (ಕರೆಂಟ್ ಕಾಸ್ಟ್). ಒಂದು ಆಸ್ತಿಯನ್ನು ಪಡೆಯಲು ನೀಡಲಾದ ಬಲೆ ಮತ್ತು ಮಾಡಲಾದ ಒಟ್ಟು ವೆಚ್ಚದ ಇಂದಿನ ಬಲೆಗಳ ಮಟ್ಟಕ್ಕೆ ಪರಿವರ್ತಿಸಲು ಸೂಚ್ಯಂಕಗಳು ಆಧಾರವಾಗಬಹುದು; ಅಂಥದೇ ಸರಕು ಅಥವಾ ಸೇವೆಯ ಚಾಲ್ತಿ ಬೆಲೆಯನ್ನು ಹಳೆಯ ಬೆಲೆಯ (ಐತಿಹಾಸಿಕ ಕ್ರಯ) ಸ್ಥಾನದಲ್ಲಿ ಅಳವಡಿಸಿಕೊಳ್ಳಬಹುದು. 	
	(ಸಿ.ಎಂ.ಎಂ.)
(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ